Posts

Showing posts from August, 2026

'ಜಗದ ಸವಿಯುಣು'

  ಪ್ರತಿಯೊಂದು ಹೊಸ ಆರಂಭವೂ ಒಂದು ತೊದಲುವಿಕೆ-ಯಿಂದಲೇ ಶುರುವಾಗುತ್ತದೆ. ನನ್ನ ಸಾಹಿತ್ಯದ ಈ ಸಣ್ಣ ಪಯಣವೂ ಹಾಗೆಯೇ. ಬದುಕಿನ ವಿಶಾಲ ಬಯಲಿನಲ್ಲಿ ಕಂಡದ್ದನ್ನು, ಅನುಭವಿಸಿದ್ದನ್ನು ಈ ಕವನದ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇನೆ. ಮೊದ-ಮೊದಲು ತೊದಲು! ​ ಕಂಡಷ್ಟು ಹೊನಲು ನಡೆದಷ್ಟು ಬಯಲು. ​ ಆಗಾಗ ಕಷ್ಟ-ನಷ್ಟದ ಸಿಡಿಲು ಕ್ಷಣ ಕ್ಷಣವೂ ಸೂಸುವ ಸುಖದ ಘಮಲು ಅರಿಯ ಹೋದರೇ.. ನಿಷ್ಕ್ರಿಯತೆಯೇ ಛದಲು! ಬಂದಿಹೇವು ನಾವು ಜಗದ ಸವಿಯುಣಲು. ​ - ಅಮರೇಶ ಎತ್ತಿನಮಾಳಗಿ