'ಜಗದ ಸವಿಯುಣು'

 ಪ್ರತಿಯೊಂದು ಹೊಸ ಆರಂಭವೂ ಒಂದು ತೊದಲುವಿಕೆ-ಯಿಂದಲೇ ಶುರುವಾಗುತ್ತದೆ. ನನ್ನ ಸಾಹಿತ್ಯದ ಈ ಸಣ್ಣ ಪಯಣವೂ ಹಾಗೆಯೇ. ಬದುಕಿನ ವಿಶಾಲ ಬಯಲಿನಲ್ಲಿ ಕಂಡದ್ದನ್ನು, ಅನುಭವಿಸಿದ್ದನ್ನು ಈ ಕವನದ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇನೆ.

ಮೊದ-ಮೊದಲು ತೊದಲು!

​ಕಂಡಷ್ಟು ಹೊನಲು

ನಡೆದಷ್ಟು ಬಯಲು.

​ಆಗಾಗ ಕಷ್ಟ-ನಷ್ಟದ ಸಿಡಿಲು

ಕ್ಷಣ ಕ್ಷಣವೂ ಸೂಸುವ

ಸುಖದ ಘಮಲು

ಅರಿಯ ಹೋದರೇ..

ನಿಷ್ಕ್ರಿಯತೆಯೇ ಛದಲು!

ಬಂದಿಹೇವು ನಾವು

ಜಗದ ಸವಿಯುಣಲು.

​- ಅಮರೇಶ ಎತ್ತಿನಮಾಳಗಿ

Comments